08354-235070 kar.bayalataacademy.bagalkot@gmail.com
ಬಾಗಲಕೋಟಕರ್ನಾಟಕ

ಸ್ಥಾಯಿ ಸಮಿತಿ

ಸ್ಥಾಯಿ ಸಮಿತಿಯ ಈ ಕೆಳಕಂಡ ೭ ಮಂದಿ ಸದಸ್ಯರನ್ನು ಹೊಂದಿರುತ್ತದೆ.

  • ಅಂದರೆ;
  • ಅಧ್ಯಕ್ಷರು
  • ರಜಿಸ್ಟ್ರಾರು
  • ಅರ್ಥ ಸದಸ್ಯರು
  • ಅಕಾಡೆಮಿಯ ಸಾಮಾನ್ಯ ಸಭೆ ಆಯ್ಕೆ ಮಾಡುವ ೪ ಮಂದಿ ಸದಸ್ಯರು.
  • ಸ್ಥಾಯಿ ಸಮಿತಿಯ ಈ ಕೆಳಕಂಡೆ ಅಧಿಕಾರ ಮತ್ತು ಕರ್ತವ್ಯಗಳನ್ನು ಹೊಂದಿದೆ.
  • ಅಕಾಡೆಮಿಯ ಕಾರ್ಯಕಾರಿ ಅಧಿಕಾರವನ್ನು ಚಲಾಯಿಸವುದು
  • ಅಕಾಡೆಮಿಯ ಮತ್ತು ಅದರ ಕಚೇರಿಯ ಕೆಲಸ ಮೇಲ್ವಿಚಾರಣೆ ಮತ್ತು ಕಾರ್ಯಕ್ರಮಗಳ ಅನುಷ್ಠಾನ ನಿಯಮಂತ್ರಣಕ್ಕೆ ಹೊಣೆಯಾಗಿರುವುದು.
  • ಅಕಾಡೆಮಿಯ ಕಾರ್ಯಕ್ರಮಗಳನ್ನು ರೂಪಿಸುವುದು, ಪರ್ಯಾಲೋಚಿಸುವುದು ಮತ್ತು ಈ ಕಾರ್ಯಯೋಜನೆಗಳನ್ನು ಅಕಾಡೆಮಿಗೆ ಒಪ್ಪಿಸುವುದು.

ಈ) ಅಕಾಡೆಮಿಯ ಅನುಮೋದನೆಗಾಗಿ ಒಪ್ಪಿಸತಕ್ಕ ಅಕಾಡೆಮಿಯ ವಾರ್ಷಿಕ ಬಜೆಟನ್ನು (ಸರ್ಕಾರದಿಂದ ಗೊತ್ತುಪಡಿಸಿದ ಆರ್ಥಿಕ ಮಿತಿಗಳಿಗೆ ಒಳಪಟ್ಟು) ರೂಪಿಸುವುದು ಹಾಗೂ ಕಾರ್ಯಕ್ರಮಗಳನ್ನು ಚಾಲ್ತಿ ನಿಯಮಗಳಂತೆಯೇ ಅನುಷ್ಠಾನಗೊಳಿಸಲು ಬದ್ಧವಾಗಿರಬೇಕು.

ಉ) ಅಕಾಡೆಮಿಯ ಪರಿಶೀಲನೆಗಾಗಿ ಒಪ್ಪಿಸತಕ್ಕ ಅಕಾಡೆಮಿಯ ವಾರ್ಷಿಕ ವರದಿಯನ್ನು ಮತ್ತು ಲೆಕ್ಕಪತ್ರಗಳನ್ನು ಗೊತ್ತುಪಡಿಸಿಕೊಂಡ ಕ್ರಮದಲ್ಲಿ ತಯಾರಿಸುವುದು.

ಊ) ಸ್ಥಾಯಿ ಸಮಿತಿಯ ತಿಂಗಳಲ್ಲಿ  ಒಂದು ಸಲ ಕೇಂದ್ರ ಸ್ಥಾನದಲ್ಲಿ ಸಭೆ ಸೇರಬೇಕು. ಆದರೆ ಅತ್ಯಂತ ಅಗತ್ಯವಾದ ತುರ್ತು ಸಂದರ್ಭದಲ್ಲಿ ಇನ್ನೊಂದು ಸಭೆ ಸೇರಬಹುದು. (ಉದಾಹರಣೆ: ಪ್ರಶಸ್ತಿ ಪ್ರದಾನ ಸಮಾರಂಭ ಇತ್ಯಾದಿ) .

ಋ) ಅಕಾಡೆಮಿಯ ಅಧ್ಯಕ್ಷರು ಸ್ಥಾಯಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು ಮತ್ತು ಅವರ ಗೈರು ಹಾಜರಿಯಲ್ಲಿ ಸದಸ್ಯರ ಪೈಕಿ ಒಬ್ಬ ಸದಸ್ಯರನ್ನು ಅಂತ ಸಭೆಯ ಅಧ್ಯಕ್ಷತೆವಹಿಸಲು ಚುನಾಯಿಸಬೇಕು.

VI) ಅಕಾಡೆಮಿಯ ಹಣಕಾಸು:

ಅ) ಅಕಾಡೆಮಿಯ ನಿಧಿಗಳೂ ಕೆಳಕಂಡವುಗಳನ್ನು ಒಳಗೊಂಡಿರುತ್ತೆ.

೧) ಅಕಾಡೆಮಿಯ ಉದ್ದೇಶ್ಗಳ ಅನುಷ್ಠಾನ ಮತ್ತು ವಿಸ್ತರಣೆಗಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಕೇಂದ್ರ ಅಕಾಡೆಮಿಗಳು, ನವದೆಹಲಿ – ಇವಗಳನ್ನು ಹಾಗೂ ಖಾಸಗಿ ಸಂಸ್ಥೆ ಮತ್ತು ಸಾರ್ವಜನಿಕರಿಂದ ಬಂಡ ಅನುದಾನಗಳು, ಕೊಡುಗೆಗಳು, ವಂತಿಕೆಗಳು ದನಗಳು ಮುಂಗಡಗಳು ಮತ್ತು ಸಾಲಗಳು.

೨) ಅಕಾಡೆಮಿಯ ಉತ್ವನ್ನಗಳ ಹಾಗು ಕಲಾಕೃತಿಗಳ ಮಾರಾಟದಿಂದ ಬಂದ ಜಾಮ್ಗಳು ಮತ್ತು ಅಕಾಡೆಮಿಯು ಇತರೆ ಯಾವುದೇ ರೀತಿಯಲ್ಲಿ ಸ್ವೀಕರಿಸಿದ ಯಲ್ಲ ಇತರ ಹಣ.

ಆ) ಅಕಾಡೆಮಿಯ ರಿಜಿಸ್ಟ್ರಾರ್ ಮತ್ತು ಅರ್ಥ ಸದಸ್ಯರು ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ತೆಗೆದು ನಿರ್ವಹಿಸಬೇಕು.