08354-235070 kar.bayalataacademy.bagalkot@gmail.com
ಬಾಗಲಕೋಟಕರ್ನಾಟಕ

ಪ್ರಶಸ್ತಿ ಪುರಸ್ಕಾರಗಳು

ಅಕಾಡೆಮಿಯು ತನ್ನ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ – ಪುರಸ್ಕಾರ ಹಾಗು ಬಹುಮಾನಗಳನ್ನು ಪ್ರತಿವರ್ಷವೂ ಕೊಡಬೇಕು . ಅವುಗಳ ವಿವರ ಮುಂದಿನಂತೆ ಇರುತ್ತವೆ .

ಅ. ನಿಯಮ ೧೧೧ ರ (೧) ರಲ್ಲಿ ವಿವರಿಸಿರುವ ಬಯಲಾಟ ಕಲಾ ಪ್ರಕಾರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕದ

೧. ಗಣ್ಯರಿಗೆ ಮೀರದಂತೆ ಗೌರವ ಪ್ರಶಸ್ತಿಗಳನ್ನು ಕೊಡುವದು . ಪ್ರಶಸ್ತಿಯ ಮೊತ್ತ  ತಲಾ ರೂ .೫೦,೦೦೦/- (ಐವತ್ತು ಸಾವಿರ ರೂಪಾಯಿಗಳು ಮಾತ್ರ )

೨. ಹತ್ತು ಜನ ಕಲಾವಿದರಿಗೆ ಮೀರದಂತೆ ವಾರ್ಷಿಕ ಪ್ರಶಸ್ತಿಗಳನ್ನು ಕೊಡುವದು . ಮೊತ್ತ ರೂ ೨೫,೦೦೦/- (ಇಪ್ಪತೈದು ಸಾವಿರ ರೂಪಾಯಿಗಳು ಮಾತ್ರ )

೩. ಬಯಲಾಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗರಿಷ್ಠ ಮೂರು ಪುಸ್ತಕಗಳಿಗೆ ಬಹುಮಾನವನ್ನು ಕೊಡುವದು . ಸಂಪಾದನೆ , ಸಂಶೋಧನೆ , ಜೀವನ ಚರಿತ್ರೆ ಹೀಗೆ ಬಹುಮಾನಕ್ಕೆ ಪರಿಗಣಿಸುವ ಪ್ರತಿ ಪ್ರಕಾರದಲ್ಲೂ ಆ ವರ್ಷದಲ್ಲಿ ಕನಿಷ್ಠ ೩ ಶೀರ್ಷಿಕೆಗಳಾದರು ಪ್ರಕಟವಾಗಿರಬೇಕು . ಬಹುಮಾನದ ಮೊತ್ತ ರೂ ೨೫,೦೦೦/- (ಇಪ್ಪತೈದು ಸಾವಿರ ರೂಪಾಯಿಗಳು ಮಾತ್ರ )

೪. ಬಯಲಾಟ ಕಲಾ ಪ್ರಕಾರಗಳಲ್ಲಿ ಜೀವಮಾನದ ಸಾಧನೆ ಮಾಡಿದ ಇಬ್ಬರು ಶ್ರೇಷ್ಠ ಕಲಾವಿದರಿಗೆ  ಅದರಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಕಲಾವಿದರಿರಬೇಕು . ತಲಾ ೧,೦೦,೦೦೦/- (ಒಂದು ಲಕ್ಷ ರೂಪಾಯಿಗಳು  ಮಾತ್ರ ) ಮೊತ್ತದ ಎರಡು ವಿಶೇಷ ಪ್ರಶಸ್ತಿಗಳನ್ನು  ಅಕಾಡೆಮಿ ಕೊಡಮಾಡಬೇಕು.

2017 ನೆಯ ಸಾಲಿನ ಕ.ಬ.ಅ. ಬಾಗಲಕೋಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪುರಸ್ಕೃತರು


2018 ನೆಯ ಸಾಲಿನ ಕ.ಬ.ಅ. ಬಾಗಲಕೋಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪುರಸ್ಕೃತರು