08354-235070 kar.bayalataacademy.bagalkot@gmail.com
ಬಾಗಲಕೋಟಕರ್ನಾಟಕ

ಕರ್ನಾಟಕ ಬಯಲಾಟ ಅಕಾಡೆಮಿಯ ಅಂಗರಚನೆ

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯನ್ನು ಈಗ ಬಯಲಾಟ ಅಕಾಡೆಮಿ ಹಾಗೂ ಯಕ್ಷ ಗಾನ ಅಕಾಡೆಮಿ ಎಂಬುದಾಗಿ ವಿಭಜನೆ ಮಾಡಿ ಅಥವಾ ಎರಡು ಪ್ರತ್ಯೇಕ ಅಕಾಡೆಮಿಗಳನ್ನಾಗಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಪದನಿಮಿತ್ತ ಅಧ್ಯಕ್ಷ ಹಾಗೂ ಸದಸ್ಯರನ್ನು ಸರಕಾರ ನೇಮಕ ಮಾಡಿದೆ

ಕರ್ನಾಟಕ ಬಯಲಾಟ ಅಕಾಡೆಮಿಯ ಪ್ರಧಾನ ಕಚೇರಿ ಬಾಗಲಕೋಟೆಯಲ್ಲಿ ಇದ್ದು , ಧೇಯೋದ್ದೇಶಗಳು ಕೆಳಗಿನಂತಿವೆ:

೧. ಈ ಅಕಾಡೆಮಿಯ ವ್ಯಾಪ್ತಿಯಲ್ಲಿ ಎಲ್ಲ ವಿಧವಾದ ಬಯಲಾಟ ಪ್ರಕಾರಗಳು ಅಂದರೆ ದೊಡ್ಡಾಟ , ಸಣ್ಣಾಟ , ಪಾರಿಜಾತ , ಸೂತ್ರದ ಗೊಂಬೆಯಾಟ , ತೊಗಲು ಗೊಂಬೆಯಾಟ ಮುಂತಾದ ಪ್ರದರ್ಶನ ಕಲಾಪ್ರಕಾರಗಳು ಒಳಗೊಳ್ಳುತ್ತದೆ.

೨. ಈ ಕಲೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವದು . ಈ ಉದ್ದೇಶಕ್ಕಾಗಿ ಸಂಶೋಧನಾಲಯ , ಗ್ರಂಥಾಲಯ ಮುಂತಾದುವನ್ನು ಸ್ಥಾಪಿಸುವದು.

೩. ಬಯಲಾಟ ಅಕಾಡೆಮಿಯು ತನ್ನ ಉದ್ದೇಶಗಳ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಬೇರೆ ಕಡೆಯಲ್ಲಿರುವ ಅದೇ ರೀತಿಯ ಅಕ್ಯಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರ ಸಂಸ್ಥೆಗಳೊಡನೆ ಸಹಕರಿಸುವದು : ಉತ್ತೇಜನ ನೀಡುವದು.

೪. ಬಯಲಾಟ ಅಕಾಡೆಮಿಯು ತನ್ನ ಕಾರ್ಯ ಚಟುವಟಿಕೆಗಳ ಉದ್ದೇಶಕಾಗು ಸರ್ಕಾರದಿಂದ ಪಡೆದ ಅನುದಾನ ಹಾಗು ವಿವಿಧ ಮೂಲಗಳಿಂದ ವಂತಿಕೆಗಳು ಮತ್ತು ಅಕಾಡೆಮಿಯ ಕಾರ್ಯೋದ್ದೇಶಗಳಿಗೆ ಬದ್ಧವಾಗಿ ಬಳಸಿದ ಬಗ್ಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ , ಕರ್ನಾಟಕ ಆರ್ಥಿಕ ಸಂಹಿತೆ , ಸಾದಿಲ್ವಾರು ಸಂಹಿತೆ ಪ್ರಕಾರ ಖರ್ಚಿನ ವಿವರಗಳನ್ನು ಇಡುವದು . ವಂತಿಕೆ ಹಾಗು ದಾನ ಕೊಟ್ಟವರು ಅಪೇಕ್ಷಿಸಿದಲ್ಲಿ ಅವರ ವಂತಿಕೆ ಹಾಗು ದಾನದ ಮೊತ್ತದ ಖರ್ಚಿನ ವಿವರಗಳನ್ನು ಲಿಖಿತವಾಗಿ ಅವರಿಗೆ ಒದಗಿಸುವದು .

೫. ಬಯಲಾಟ ಅಕಾಡೆಮಿಯು ತನ್ನ ವಿಷಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕೀರ್ಣ , ಕಾರ್ಯಾಗಾರ , ಸಂವಾದ , ಉನ್ನತ ಮಟ್ಟದ ಅಕಾಡೆಮಿಕ್ ಉತ್ಸವ , ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ನಡೆಸುವದು . ಈ ಕಾರ್ಯಕ್ರಮಗಳನ್ನು ಎರಡು ವಿಧಾನಗಳಲ್ಲಿ ವ್ಯವಸ್ಥೆಗೊಳಿಸಬಹುದು.

ಅ. ಅಕ್ಯಾಡೆಮಿಯೇ ನೇರವಾಗಿ ಈ ಕಾರ್ಯಕ್ರಮಗಳನ್ನು  ವ್ಯವಸ್ಥೆಗೊಳಿಸಬಹುದು

ಆ . ವಿವಿಧ ಸಂಘ – ಸಂಸ್ಥೆಗಳ ಜೊತೆ ಸಂಯುಕ್ತವಾಗಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುವದು.

೬. ಕರ್ನಾಟಕ ಸರ್ಕಾರ , ಕೇಂದ್ರ ಸರ್ಕಾರ , ಕೇಂದ್ರ ಸರ್ಕಾರ ಅಕಾಡೆಮಿಗಳು ವಲಯ ಸಂಸ್ಕೃತಿ ಕೇಂದ್ರಗಳು ಅಪೇಕ್ಷಿಸಿದ ಸೂಕ್ತ ಸಲಹೆಗಳನ್ನು ನೀಡುವದು .

೭. ಬಯಲಾಟ ಅಕಾಡೆಮಿಯು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ಪುಸ್ತಕ ಪ್ರಕಟಣೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿ ಪಾರದರ್ಶಕತೆ ಅಧಿನಿಯಮದ ರೀತಿ ಮಾಡಬಹುದು . ಈ ಪ್ರಕಟಣೆಗಳಿಗೆ ವಾರ್ಷಿಕ ಅನುದಾನದಲ್ಲಿ ವಾರ್ಷಿಕ ಕಾರ್ಯಕ್ರಮಗಳಿಗೆ ಗೊತ್ತುಪಡಿಸಿದ ಮೊತ್ತದಲ್ಲಿ ಶೇ ೧೫ ರಷ್ಟನ್ನು ಮಾತ್ರ ಹಂಚಿಕೆ ಮಾಡಿ ಬಳಸಿಕೊಳ್ಳಬೇಕು .

೮ . ಅಕಾಡೆಮಿಯು ತನ್ನ ಕ್ಷೇತ್ರ  ಹಾಗು ವ್ಯಾಪ್ತಿಗೆ ಸೇರಿದ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡುವದು