ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲೆಕ್ಕ ಪತ್ರಾಧಿಕಾರಿಗಳು ಅಕಾಡೆಮಿಯ ಪದನಿಮಿತ್ತ ಅರ್ಥ ಸದಸ್ಯರಾಗಿರಬೇಕು ಮತ್ತು ಸ್ಥಾಯಿ ಸಮಿತಿಯ ಸದಸ್ಯರೂ ಆಗಿರಬೇಕು .
೨. ಅಕಾಡೆಮಿಯು ನಿಯಮಗಳಿಗೆ ಒಳಪಟ್ಟು ಮತ್ತು ರೆಜಿಸ್ಟ್ರಾರರ ಸಹ ಹೊಣೆಗಾರಿಕೆಯಲ್ಲಿ ಬಜೆಟ್ ಸಿದ್ಧಪಡಿಸುವ ಹಾಗು ಅನುಮೋದಿತ ಕಾರ್ಯಕ್ರಮಗಳಿಗೆ ಸರಿಯಾಗಿ ಬಳಸಿಕೊಳ್ಳಲು ಜವಾಬ್ದಾರರಾಗಿರಬೇಕು .
೩. ಅಕಾಡೆಮಿಯಿಂದ ಪಾವತಿ ಮಾಡುವ ಹಣಕ್ಕೆ ಸೂಕ್ತ ದಾಖಲೆ ಪಡೆಯುವದು.
೫. ಅಕಾಡೆಮಿಯ ಪ್ರಾಧಿಕಾರಗಳು : ಈ ಕೆಳಕಂಡವು ಅಕಾಡೆಮಿಯ ಪ್ರ್ರಾಧಿಕಾರಗಳಾಗಿರತಕ್ಕದ್ದು ,
ಎಂದರೆ :
೧. ಅಕಾಡೆಮಿ
೨. ಸ್ಥಾಯಿ ಸಮಿತಿ
೧. ಅಕಾಡೆಮಿ :
ಇ) ಅಕಾಡೆಮಿಯು ಕೆಳಕಂಡ ೧೯ ಸದಸ್ಯರನ್ನು ಮಾತ್ರ ಹೊಂದಿರತಕ್ಕದ್ದು .
ಅ) ಅಧ್ಯಕ್ಷರು
ಆ) ರೆಜಿಸ್ಟ್ರಾರರು
ಇ) ಅರ್ಥ ಸದಸ್ಯರು
ಈ) ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು ಅಥವಾ ಅವರ ಪ್ರತಿನಿಧಿ ( ಸಹಾಯಕ ನಿರ್ದೇಶಕರ ಶ್ರೇಣಿಗೆ ಕಡಿಮೆ ಇಲ್ಲದಂತೆ )
ಉ) ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ ೧೨ ಮಂದಿ ಸದಸ್ಯರು
ಊ) ಅಕಾಡೆಮಿಯ ಮೊದಲ ಸಭೆಯಲ್ಲಿ ಅಕಾಡೆಮಿಯ ಆಯ್ಕೆ ಮಾಡಿಕೊಂಡ ೩ ಮಂದಿ ಸಹ ಸದಸ್ಯರು
ಋ) ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ ಅಧ್ಯಕ್ಷರು / ಸದಸ್ಯರು ರಾಜೀನಾಮೆ ನೀಡಿದ ಅಥವಾ ಮರಣ ಹೊಂದಿದ ಅಥವಾ ಕಾನೂನಿನ ಕಾರಣದಿಂದ ಮುಂದುವರೆಯಲು ಅಸಮರ್ಥರಾದ ಕಾರಣದಿಂದ ಖಾಲಿಯಾದ ಯಾವುದೇ ಸ್ಥಾನವನ್ನು ತುಂಬಲು ರಾಜ್ಯ ಸರ್ಕಾರವು ವ್ಯಕ್ತಿಗಳನ್ನು ನಾಮನಿರ್ದೇಶಿಸಬಹುದು . ಹಾಗೆ ನಾಮನಿರ್ದೇಶಿತನಾದ ವ್ಯಕ್ತಿಯು ಆಕಾಡೆಮಿಯ ಉಳಿದ ಬಾಕಿ ಅವಧಿಗೆ ಮಾತ್ರ ಪದಧಾರಣ ಮಾಡಬೇಕು .
ಋ. ಸಹ ಆಯ್ಕೆ ಸದಸ್ಯರು ರಾಜೀನಾಮೆ ನೀಡಿದಲ್ಲಿ ಅಥವಾ ಮೃತರಾದಲ್ಲಿ ಅವರ ಸ್ಥಾನಕ್ಕೆ ಉಳಿದ ಅವಧಿಗೆ ಮಾತ್ರ ಅಕ್ಯಾಡೆಯಿಯ ಸರ್ವ ಸದಸ್ಯರ ಸಭೆಯಲ್ಲಿ ಬೇರೊಬ್ಬರನ್ನು ತುಂಬಿಕೊಳ್ಳಬೇಕು