08354-235070 kar.bayalataacademy.bagalkot@gmail.com
ಬಾಗಲಕೋಟಕರ್ನಾಟಕ

ಅಧ್ಯಕ್ಷರು

ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನಾವು ನಿರ್ದೇಶಿಸುತ್ತದೆ ಮತ್ತು ಅವರು ಮೂರೂ ವರ್ಷಗಳ ಅವಧಿಯವರಿಗೆ ಪದಧಾರಣ ಮಾಡಬೇಕು.

ಹೀಗೆ ಅಧ್ಯಕ್ಷರಾಗಿ ನಾಮನಿರ್ದೇಶಿತರಾದವರು ಯಾವುದೇ ಸಂಸ್ಥೆಯಲ್ಲಿ ಪೂರ್ಣಾವಧಿಗೆ ವೇತನ/ಸಂಭಾವನೆ ಪಡೆಯುವ ಉದ್ಯೋಗಿಯಾಗಿರಬಾರದು.

೫) ಅಧ್ಯಕ್ಷರು ಅಕಾಡೆಮಿಯ ಮುಖ್ಯಸ್ಥರಾಗಿರಬೇಕು. ಅವರು ಅಕಾಡೆಮಿಯ ಯಲ್ಲ ಸಮಿತಿಗಳ ಪದನಿಮಿತ್ತ ಸದಸ್ಯರಾಗಿರಬೇಕು ಮತ್ತು ಈಗ ಸ್ವಾಯತ್ತ ನಿಯಮಾವಳಿಯಡಿ ಮಾಡಲಾದ ನಿಯಮಗಳ ಮತ್ತು ಉಪಬಂಧಗಳ ಮೇರೆಗೆ ನೇಮಕಗೊಂಡ ಸ್ಥಾಯಿ ಸಮಿತಿಯ ಮತ್ತು ಇತರ ಸಮಿತಿಗಳ ಸಭೆಗಳ ಅಧ್ಯಕ್ಷತೆ ವಹಿಸಬೇಕು. 

೬) ಅಧ್ಯಕ್ಷರು ಅಕ್ಯಾಡೆಮಿಯೊಡನೆ, ಸಂದರ್ಭನುಸಾರ ಸ್ಥಾಯಿ ಸಮಿತಿಯೊಡನೆ ಸಮಾಲೋಚಿಸಿ ಪ್ರತಿ ವರ್ಷಕ್ಕೆ ಗರಿಷ್ಠ ರೂ. ೫೦,೦೦೦/- (ಐವತ್ತು ಸಾವಿರ ರೂ. ಗಳು ಮಾತ್ರ)ಗಾಳಿಗೊಳಪಟ್ಟು ಪ್ರತಿ ಸಂದರ್ಭದಲ್ಲೂ ೧೦,೦೦೦/- (ಹತ್ತು ಸಾವಿರ ರೂ.ಗಳು ಮಾತ್ರ) ರೂಪಾಯಿ ಮೀತಿವಾರಿಗೆ ಅಕಾಡೆಮಿಯ ಉದ್ದೇಶಗಳಿಗೆ ಒಳಪಟ್ಟಂತೆ ಜರೂರು ಸ್ವರೂಪದ ಯಾವುದೇ ಕಾರ್ಯಕ್ರಮವನ್ನು ನಿರ್ಧರಿಸಲು ಅಧಿಕಾರ ಹೊಂದಿರಬೇಕು ಮತ್ತು ಅಧ್ಯಕ್ಷರಿಂದ ಹಾಗು ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆದ ವೆಚ್ಚ ಭರಿಸಲು ರಜಿಸ್ಟ್ರಾರರು ವಿಧಿಬದ್ಧವಾಗಿರಬೇಕು. ಹಾಗಿದ್ದರೂ, ಅಧ್ಯಕ್ಷರು ಇಂತಹ ವೆಚ್ಚದ ವಿವರಗಳನ್ನು ಅಕಾಡೆಮಿಯ ಮುಂದಿನ ಸಭೆಯಲ್ಲಿ ಇಡಬೇಕು.

೭) ಅಧ್ಯಕ್ಷರು ಗೌರುವ ಸಂಭಾವನೆಯಾಗಿ ಮಾಹೆಯಾನ ರೂ. ೨೫೦೦೦/- (ಇಪ್ಪತ್ತೈದು  ಸಾವಿರ ರೂ. ಗಳು ಮಾತ್ರ) ಗಳನ್ನೂ ಪಡೆಯಬಹುದು.

೮) ಅಕಾಡೆಮಿಯ ಕೇಂದ್ರ ಸ್ಥಳದ ಹೊರಗಡೆಯಿಂದ ನಮ ನಿರ್ದೇಶಿತರಾದ ಅಧ್ಯಕ್ಷರ ಸಂದರ್ಭದಲ್ಲಿ, ಅಕಾಡೆಮಿಯ ಕಾರ್ಯಕಲಾಪಗಳಿಗೆ ಕೇಂದ್ರ ಸ್ಥಾನಕ್ಕೆ ಬಂದಾಗ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಯನ್ನು ಸರ್ಕಾರಿ  ನಿಯಮಗಳಂತೆ ಪಡೆಯಬೇಕು ಅಕಾಡೆಮಿಯ ಸಭೆಗಳ ಸಭಾ ಭತ್ಯೆ ಪಡೆಯುವಂತಿಲ್ಲ.

೯) ಅಕಾಡೆಮಿಯ ಅಧ್ಯಕ್ಷರಿಗೆ ಸರ್ಕಾರೀ ವಾಹನ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ. ಆದರೆ ಕಾರ್ಯಕ್ರಮಗಳಾಗಿ ನಡೆಸುವ ಓಡಾಟ ಶ್ರಮದಾಯಿಕವಾಗಿದೆ. ಈ ಕಾರಣದಿಂದ ಅಧಯಕ್ಷರಿಗೆ ವಾಹನ ಸೌಲಭ್ಯವನ್ನು ಕಲ್ಪಿಸಲು, ಈಗಿರುವ ಸರ್ಕಾರೀ ಆದೇಶದಂತೆ, ಮಾಸಿಕ ಹೊರಗುತ್ತಿಗೆ ಆಧಾರದ ಮೇಲೆ ವಾಹನವನ್ನು ಪರ ಊರಿಗೂ ಪ್ರಯಾಣಿಸಲು ಅನಿಮತಿಸುವುದು.